• Varta Astrologers
  • Ravikishore
  • Esha
  • Poonam
  • Rakesh
  1. Lang :

ಇಂದಿನ ಚಂದ್ರೋದಯ ಸಮಯ New Delhi, India ಗಾಗಿ ಪಂಚಾಂಗ

ಚಂದ್ರ ಉದಯ : 19:03:59
ಚಂದ್ರಾಸ್ತ : 08:18:59

ಇಂದಿನ ಚಂದ್ರೋದಯ ಸಮಯ ಬುಧವಾರ, ಜನವರಿ 19, 2022 New Delhi, India ಗಾಗಿ ಪಂಚಾಂಗ

ಚಂದ್ರನಿಗೆ ಸಂಬಂಧಿಸಿದ ವಿಶೇಷ ಉಪವಾಸ, ಹಬ್ಬಗಳ ದಿನದಂದು ಬೆಳಿಗ್ಗೆ ಎದ್ದ ತಕ್ಷಣವೇ ಮನುಷ್ಯನ ಮನಸ್ಸಿನಲ್ಲಿ ಚಂದ್ರ ಯಾವಾಗ ಮತ್ತು ಎಷ್ಟು ಗಂಟೆಗೆ ಉದಯಿಸುತ್ತಾನೆ ಎಂಬುವ ಸವಾಲು ಸರ್ವಪ್ರಥಮವಾಗಿ ಬರುತ್ತದೆ. ಚಂದ್ರೋದಯವು ನಮ್ಮ ಸೌರವ್ಯೂಹದಲ್ಲಿ ಉಂಟಾಗುವ ಒಂದು ಪ್ರಾಕೃತಿಕ ಘಟನೆಯಾಗಿದೆ. ಆಕಾಶದಲ್ಲಿ ಚಂದ್ರ ಉದಯಿಸುವ ಪ್ರಕ್ರಿಯೆಯನ್ನು ಚಂದ್ರೋದಯ ಎಂದು ಹೇಳಲಾಗುತ್ತದೆ. ಶಾಸ್ತ್ರಗಳಿಂದ ಸಂಗೀತ ಮತ್ತು ಚಲನಚಿತ್ರದವರೆಗೆ ಚರ್ಚಿಸಲಾಗುವಂತಹ ವಿಷಯ ಚಂದ್ರ. ಆಕಾಶದಲ್ಲಿ ಚಂದ್ರನು ಕಾಣಿಸದಿದ್ದರೆ ಭೂಮಿಯ ಮೇಲೆ ಎಲ್ಲಾ ಕಡೆ ಬರೀ ಕಟ್ಟಳೆ ಇರುತ್ತದೆ, ಈ ವಿಷಯದಿಂದ ಚಂದ್ರನ ಮಹತ್ವದ ಬಗ್ಗೆ ಅಂದಾಜು ಮಾಡಬಹುದು. ಇಂದು ಆಸ್ಟ್ರೋಸೇಜ್ ನಲ್ಲಿ ನಾವು ನಿಮಗೆ ಚಂದ್ರ, ಚಂದ್ರನ ಪ್ರಾಮುಖ್ಯತೆ, ಚಂದ್ರೋದಯ ಮತ್ತು ಚಂದ್ರನ ಅಧಿಪತಿಯ ಬಗ್ಗೆ ವಿವರವಾಗಿ ಹೇಳಲಿದ್ದೇವೆ.

ಚಂದ್ರೋದಯದ ಪ್ರಾಮುಖ್ಯತೆ

ಹಿಂದೂ ಧರ್ಮದಲ್ಲಿ ಚಂದ್ರನನ್ನು ದೇವರ ರೂಪದಲ್ಲಿ ಪರಿಗಣಿಸಲಾಗಿದೆ. ಚಂದ್ರೋದಯದ ಸಮಯಕ್ಕೆ ವಿಶೇಷ ಪ್ರಾಮುಖ್ಯತೆ ನೀಡುವಂತಹ ಅನೇಕ ಉಪವಾಸ ಮತ್ತು ಹಬ್ಬಗಳಿವೆ. ಉದಾಹರಣೆಗೆ - ಕರ್ವಾ ಚೌತ್, ತ್ರಯೋದಶಿ ಇತ್ಯಾದಿ. ಇಂತಹ ಉಪವಾಸಗಳಲ್ಲಿ ಆರಾಧಕ ಚಂದ್ರ ಉದಯಿಸಿದ ನಂತರ ಚಂದ್ರನ ದರ್ಶನೆ ಮಾಡಿ ಸಂಪೂರ್ಣ ವಿಧಾನದಿಂದ ಪೂಜೆ ಮಾಡಿ ಮತ್ತು ಅದರ ನಂತರ ಮಾತ್ರ ತಮ್ಮ ಉಪವಾಸವನ್ನು ಮುಗಿಸುತ್ತಾರೆ.

ವಾಸ್ತವವಾಗಿ ನೀಡಿದರೆ, ಕರ್ವಾ ಚೌತ್ ಉಅಪವಾಸಕ್ಕೆ ಅತಿಯಾದ ಪ್ರಾಮುಖ್ಯತೆ ನೀಡಲಾಗಿದೆ. ಕರ್ವಾಚೌತ್ ಹಿಂದೂ ಧರ್ಮದಲ್ಲಿ ಮಹಿಳೆಯರು ತಮ್ಮ ಗಂಡನ ಧೀರ್ಘಾಯುಷ್ಯಕ್ಕಾಗಿ ನಿರ್ಜಲ ಉಪವಾಸ ಮಾಡುವಂತಹ ಹಬ್ಬವಿದು. ಇಂದು ಚಂದ್ರ ಎಷ್ಟು ಗಂಟೆಗೆ ಉದಯಿಸುತ್ತಾನೆ ಎಂಬುವ ಪ್ರಶ್ನೆ ಅವರ ಮನಸ್ಸಿನಲ್ಲಿ ಬೆಳಿಗ್ಗೆಯಿಂದಲೇ ಬರುತ್ತಿರುತ್ತದೆ. ಏಕೆಂದರೆ ಆಹಾರವನ್ನು ಬಿಟ್ಟು ಬೆಳಿಗ್ಗೆಯಿಂದ ನೀರು ಕೂಡ ಕುಡಿಯದೆ ಇರುವುದು ಎಷ್ಟು ಕಷ್ಟಕರವಾಗಿರಬಹುದು.

ವಿವಿಧ ಧರ್ಮ ಮತ್ತು ಸಮುದಾಯದ ಜನರು ಒಟ್ಟಾಗಿ ಇರುವಂತಹ ಏಕಮಾತ್ರ ದೇಶ ನಮ್ಮ ಭಾರತ. ಎಲ್ಲರ ವಾಸಿಸುವ, ಮಾತನಾಡುವ, ಜೀವನವನ್ನು ಬದಕುವ ತನ್ನದೇ ಆದ ವಿಭಿನ್ನ ಪದ್ಧತಿಯಿದೆ. ಆದರೆ ಇವುಗಳಲ್ಲಿ ಕೆಲವು ಹೋಲಿಕೆಗಳು ಇವೆ. ಚಂದ್ರ ಸಹ ಅವುಗಳಲ್ಲಿ ಒಂದಾಗಿದೆ. ಕೇವಲ ಹಿಂದೂ ಧರ್ಮ ಮಾತ್ರವಲ್ಲದೆ ಇಸ್ಲಾಂ ಧರ್ಮದಲ್ಲೂ ರಂಜಾನ್ ಪವಿತ್ರ ದಿನಗಳಲ್ಲಿ ಚಂದ್ರ ಮತ್ತು ಚಂದ್ರೋದಯದ ಬಹಳ ಪ್ರಾಮುಖ್ಯತೆ ಇದೆ. ಮುಸ್ಲಿಂ ಜನರ ಪ್ರಸಿದ್ಧ ಹಬ್ಬವಾದ ಈದ್ ಕೂಡ ಚಂದ್ರನನ್ನು ನೋಡಿದ ನಂತರ ಆಚರಿಸಲಾಗುತ್ತದೆ. ಈದ್ ದಿನದಂದು ಜನರು ಚಂದ್ರ ಯಾವಾಗ ಉದಯಿಸುತ್ತಾನೆ ಎಂದು ನಿರೀಕ್ಷಿಸುತ್ತಾರೆ. ಏಕೆಂದರೆ ಚಂದ್ರನನ್ನು ನೋಡಿದ ನಂತರ ಮಾತ್ರ ಅವರ ಈ ಹಬ್ಬವು ಪೂರ್ಣಗೊಳ್ಳುತ್ತದೆ.

ಪ್ರತಿಯೊಂದು ನಗರಕ್ಕೆ ಚಂದ್ರೋದಯದ ಸಮಯವೂ ವಿವಿಧವಾಗಿರುತ್ತದೆ. ಯಾವುದೇ ನಗರದ ಭೌಗೋಲಿಕ ಸ್ಥಾನದ ಪ್ರಕಾರ ಉಪವಾಸದ ಕೋಷ್ಟಕವನ್ನು ನಿರ್ಮಿಸುವುದು ಬಹಳ ಅಗತ್ಯವಾಗಿರುತ್ತದೆ. ಇದಲ್ಲದೆ ಪಂಚಾಂಗದಲ್ಲಿ ಚಂದ್ರೋದಯದ ಸಮಯದಲ್ಲಿ ಬೀಳುವಂತಹ ದಿನಾಂಕಗಳಿಗೆ ಹೆಚ್ಚು ಪ್ರಾಮುಖ್ಯತೆ ನೀಡುವಂತಹ ಹಲವಾರು ಹಬ್ಬಗಳಿವೆ ಮತ್ತು ಚಂದ್ರ ಉದಯಿಸುವ ಪ್ರಕಾರ ಈ ಹಬ್ಬಗಳ ದಿನಾಂಕವನ್ನು ನಿರ್ಧರಿಸಲಾಗುತ್ತದೆ.

ಚಂದ್ರನ ಪ್ರಾಮುಖ್ಯತೆ

ರಾತ್ರಿಯ ದೇವರಾದ ಚಂದ್ರನನ್ನು ಕವಿತೆ ಮತ್ತು ಕಥೆಗಳಲ್ಲಿ ಚಂದ ಮಾಮ ಎಂದು ಕರೆಯಲಾಗುತ್ತದೆ. ಇದರ ಬಗ್ಗೆ ನಾವು ಬಾಲ್ಯದಿಂದಲೇ ಕೇಳುತ್ತಿದ್ದೇವೆ. ಚಂದ್ರ ಭೂಮಿಯ ಏಕಮಾತ್ರ ಪ್ರಾಕೃತಿಕ ಉಪಗ್ರಹ. ಇದು 27 ದಿನಗಳು, 7 ಗಂಟೆ, 43 ನಿಮಿಷ, 11.6 ಸೆಕೆಂಡಲ್ಲಿ ಭೂಮಿಯ ಒಂದು ಪರಿಕ್ರಮವನ್ನು ಪೂರ್ಣ ಮಾಡುತ್ತದೆ. ವಿಜ್ಞಾನದ ಪ್ರಕಾರ, ಚಂದ್ರನ ನೇರವಾದ ಪರಿಣಾಮವು ಮನುಷ್ಯನ ಮನಸ್ಸಿನ ಮೇಲೆ ಬೀರುತ್ತದೆ. ಯಾವುದೇ ಒಬ್ಬ ವ್ಯಕ್ತಿಯ ರಾಶಿಚಕ್ರದಲ್ಲಿ ಚಂದ್ರ ಪ್ರತಿಕೂಲವಾಗಿದ್ದರೆ, ಸ್ಥಳೀಯನು ಮಾನಸಿಕ ಕಷ್ಟಗಳನ್ನು ಎದುರಿಸಬೇಕಾಗುತ್ತದೆ.ಚಂದ್ರ ಗ್ರಹದ ಸ್ಥಾನವು ಸ್ಥಳೀಯನ ರಾಶಿಚಕ್ರದಲ್ಲಿ ಹಾಳಾಗಿದ್ದರೆ, ಮನಸ್ಸು ವಿಚಲಿತ ಮತ್ತು ಅನುಮಾನಗಳಿಂದ ತುಂಬಿರುತ್ತದೆ. ಜ್ಯೋತಿಷ್ಯ ಶಾಸ್ತ್ರದಲ್ಲಿ ಇದನ್ನು ಚಂದ್ರ ದೋಷ ಎಂದು ಹೇಳಲಾಗುತ್ತದೆ.

ಚಂದ್ರ ಯಾವ ದಿನ ತನ್ನ ಸಂಪೂರ್ಣ ಆಕಾರದಲ್ಲಿರುತ್ತಾನೋ, ಆ ದಿನವನ್ನು ಹುಣ್ಣಿಮೆ ಎಂದು ಹೇಳಲಾಗುತ್ತದೆ. ಹುಣ್ಣಿಮೆಯ ದಿನದಂದು ಚಂದ್ರನ ರೂಪವು ಬಹಳ ಸುಂದರವಾಗಿರುತ್ತದೆ. ಇಂದು ಜನರು ಬಹಳ ಕುತೂಹಲದಿಂದ ಚಂದ್ರ ಯಾವಾಗ ಉದಯಿಸುತ್ತಾನೆ ಎಂದು ನಿರೀಕ್ಷಿಸುತ್ತಾರೆ. ಹಿಂದೂ ಧರ್ಮದಲ್ಲಿ ಈ ದಿನಕ್ಕೆ ಬಹಳ ಪ್ರಾಮುಖ್ಯತೆ ಇದೆ. ಈ ದಿನದಂದು ಜನರು ಪೂಜೆ, ಉಪವಾಸ ಇತ್ಯಾದಿಗಳನ್ನು ಆಚರಿಸಿ ಚಂದ್ರ ದೇವನನ್ನು ಸಂತೋಷಪಡಿಸಿ ಅವರ ಮನವೊಲಿಸಿದ ಫಲಿತಾಂಶವನ್ನು ಪಡೆಯುವ ಹಾರೈಕೆ ಮಾಡುತ್ತಾರೆ.

ಚಂದ್ರ ದೇವ ಯಾರು?

ಚಂದ್ರನ ಪೂಜೆ ಮತ್ತು ಅವರನ್ನು ಮೆಚ್ಚಿಸಲು ಬಹಳಷ್ಟು ಜನರು ಉಪವಾಸ-ವ್ರತ ಇತ್ಯಾದಿಗಳನ್ನು ಮಾಡುತ್ತಾರೆ. ಆದರೆ ಇದರಲ್ಲಿ ಬಹಳ ಕಡಿಮೆ ಜನರು ಚಂದ್ರ ದೇವ ಯಾರು? ಎಂದು ತಿಳಿದಿರುತ್ತಾರೆ.

ಭಾಗವತ ಪುರಾಣದ ಪ್ರಕಾರ, ಚಂದ್ರನನ್ನು ಮಹರ್ಷಿ ಅತ್ರಿ ಮತ್ತು ಅನುಸೂಯಾಳ ಮಗನೆಂದು ಪರಿಗಣಿಸಲಾಗಿದೆ. ಚಂದ್ರ ದೇವನ ಬಟ್ಟೆ, ಅವರ ರಥ ಮತ್ತು ಅವರ ಕುದರೆ ಎಲ್ಲವು ಬಿಳಿ ಬಣ್ಣದಾಗಿವೆ. ಇವರ ವಂಶದಲ್ಲಿ ಭಗವಂತ ಶ್ರೀ ಕೃಷ್ಣನು ಅವತರಿಸಿದ್ದರು. ಈ ಕಾರಣದಿಂದಾಗಿ ಭಗವಂತ ಕೃಷ್ಣನ ಹಾಗೆಯೇ ಚಂದ್ರ ದೇವರಲ್ಲಿ ಸಹ ಹದಿನಾರು ಕಲೆಗಳು ಒಳಗೊಂಡಿದ್ದವು. ಸಮುದ್ರ ಮಂಥನದ ಸಮಯದಲ್ಲಿ ಉಂಟಾಗಿರುವ ಕಾರಣದಿಂದಾಗಿ ಇವರನ್ನು ತಾಯಿ ಲಕ್ಷ್ಮಿ ಮತ್ತು ಕುಬೇರ ಮಹಾರಾಜನ ಸಹೋದರನೆಂದು ಪರಿಗಣಿಸಲಾಗಿದೆ. ಭಗವಂತ ಶಿವನು ಚಂದ್ರನನ್ನು ತನ್ನ ತಲೆಯ ಮೇಲೆ ಧರಿಸಿದ್ದಾರೆ.

ಮಕ್ಕಳೊಂದಿಗೆ ಚಂದ್ರನ ಮದುವೆಯಾಗಿದೆ, ಅವುಗಳನ್ನು ನಾವು 27 ನಕ್ಷತ್ರಗಳ ರೂಪದಲ್ಲಿ ತಿಳಿದಿದ್ದೇವೆ. ಪುರಾಣಗಳ ಪ್ರಕಾರ, ಬುಧನನ್ನು ಇವರ ಮಗನೆಂದು ತಿಳಿಸಲಾಗಿದೆ. ಇದರ ಉತ್ಪತ್ತಿ ತರದಿಂದ ಆಗಿತ್ತು. ಚಂದ್ರನ ದಶೆಯು 10 ವರ್ಷಗಳಿಗೆ ಇರುತ್ತದೆ ಮತ್ತು ಇದು ಕರ್ಕ ರಾಶಿಚಕ್ರದ ಮಾಲೀಕನಾಗಿದೆ. ನವ ಗ್ರಹಗಳಲ್ಲಿ ಚಂದ್ರನಿಗೆ ಎರಡನೇ ಸ್ಥಾನವನ್ನು ನೀಡಲಾಗಿದೆ.

ಆಸ್ಟ್ರೋಸೇಜ್ ನಲ್ಲಿ ಏನಿದೆ ವಿಶೇಷ

ಆಸ್ಟ್ರೋಸೇಜ್ ಅಡಿಯಲ್ಲಿ ಬರುವ ಯಾವುದೇ ಕೋಷ್ಟಕ ವಿವಿಧ ನಗರಗಳ ಭೌಗೋಳಿಕ ಸ್ಥಾನವನ್ನು ಗಮನದಲ್ಲಿಟ್ಟು ತಯಾರಿಸಲಾಗುತ್ತದೆ. ಆದ್ದರಿಂದ ಇದು ಬಹಳ ವಿಶ್ವಾಸಾರ್ಹ ಮತ್ತು ನಿಖರವಾಗಿರುತ್ತದೆ. ಹೆಚ್ಚಿನ ಪಂಚಾಂಗವು ವಿವಿಧ ನಗರಗಳಿಗೆ ಒಂದೇ ಕೋಷ್ಟಕವನ್ನು ನಿರ್ಮಿಸುತ್ತದೆ ಆದ್ದರಿಂದ ಅದು ಒಂದೇ ನಗರಕ್ಕೆ ಮಾತ್ರ ಗಣನೀಯವಾಗಿರುತ್ತದೆ. ಆಸ್ಟ್ರೋಸೇಜ್ ನಲ್ಲಿ ನೀಡಲಾಗಿರುವ ಚಂದ್ರೋದಯ ಕ್ಯಾಲ್ಕ್ಯುಲೇಟರ್ ಮೊಲ್ಲ್ಯಾಕ ನೀವು ಯಾವುದೇ ವಿಶೇಷ ಪೂಜೆ, ಹಬ್ಬ ಮತ್ತು ಉಪವಾಸದ ದಿನಗಳಂದು ಚಂದ್ರೋದಯದ ಸಮಯ ಅಥವಾ ಇಂದು ಚಂದ್ರ ಯಾವಾಗ ಉದಯಿಸುತ್ತಾನೆ ಎಂಎಂಬುದರ ಬಗ್ಗೆ ವಿವರವಾದ ಮಾಹಿತಿ ಪಡೆಯಬಹುದು.

AstroSage on Mobile ALL MOBILE APPS

AstroSage TV SUBSCRIBE

Buy Gemstones

Best quality gemstones with assurance of AstroSage.com

Buy Yantras

Take advantage of Yantra with assurance of AstroSage.com

Buy Navagrah Yantras

Yantra to pacify planets and have a happy life .. get from AstroSage.com

Buy Rudraksh

Best quality Rudraksh with assurance of AstroSage.com